Actor 'Ravichandran' Speaks About Sudeep in Colors Super Channel's popular show 'Super talk time'.
ನಟನೆ ಮತ್ತು ನಿರ್ದೇಶನ... ಎರಡು ವಿಭಾಗದಲ್ಲಿ ಕಿಚ್ಚ ಸುದೀಪ್ ಗುರುತಿಸಿಕೊಂಡಿದ್ದಾರೆ. ಸುದೀಪ್ ನಟನೆ ಕೆಲವರಿಗೆ ಇಷ್ಟ ಆದರೆ ಇನ್ನೂ ಕೆಲವರಿಗೆ ಅವರು ನಿರ್ದೇಶನ ಮಾಡುವುದು ಇಷ್ಟ. ಇದೇ ರೀತಿ ರವಿಚಂದ್ರನ್ ಸಹ ಸುದೀಪ್ ಅವರ ನಟನೆ ಮತ್ತು ನಿರ್ದೇಶನದಲ್ಲಿ ತಮಗೆ ಯಾವುದು ಇಷ್ಟ ಅಂತ ಹೇಳಿದ್ದಾರೆ. ಸೂಪರ್ ಕಲರ್ಸ್ ವಾಹಿನಿಯ 'ಸೂಪರ್ ಟಾಕ್ ಟೈಂ' ಕಾರ್ಯಕ್ರಮದಲ್ಲಿ ಅಕುಲ್ 'ಸುದೀಪ್ ಅವರ ನಿರ್ದೇಶನ ನಿಮಗೆ ಇಷ್ಟನಾ? ಅಥವಾ ನಟನೆ ಇಷ್ಟನಾ?' ಅಂತ ರವಿಚಂದ್ರನ್ ಗೆ ಪ್ರಶ್ನಿಸಿದರು. ಆಗ ರವಿಚಂದ್ರನ್ ಸುದೀಪ್ ಒಬ್ಬ ನಿರ್ದೇಶಕನಾಗಿ ನೋಡುವುದಕ್ಕಿಂತ ಒಬ್ಬ ನಟನಾಗಿ ನೋಡುವುದಕ್ಕೆ ತುಂಬ ಇಷ್ಟ ಅಂತ ಉತ್ತರಿಸಿದರು.